ಕನ್ನಡ ವಿಜ್ಞಾನ ಸಮ್ಮೇಳನಗಳು

ಕನ್ನಡದಲ್ಲಿ ವೈಜ್ಞಾನಿಕ ವಿಷಯಗಳ ವಿನಿಮಯ, ಸಂವಹನ ಹಾಗೂ ಚಿಂತನೆಯನ್ನು ಪಸರಿಸುವುದು, ಅವುಗಳ ಫಲಶೃತಿ ಜನರನ್ನು ತಲಪುವಂತೆ ಮಾಡುವುದು ಸ್ವವಿಆಕದ ಒಂದು ಮೂಲ ಉದ್ದೇಶವಾಗಿದ್ದು, ಕನ್ನಡ ವಿಜ್ಞಾನ ಸಮ್ಮೇಳನವು ಈ ನಿಟ್ಟಿನಲ್ಲಿ ನಮ್ಮ ಬಹು ಮಹತ್ವದ ಕಾರ್ಯಕ್ರಮವೆಂದರೆ ತಪ್ಪಾಗಲಾರದು. ಭಾರತದ ಮಹಾನ್ ದ್ರಷ್ಟಾರರು, ಅಭಿಯಂತರರು, ರಾಜನೀತಿಜ್ಞರೂ, ಸ್ವದೇಶಿ ಪರಿಕಲ್ಪನೆಯನ್ನು ಭಾರತಕ್ಕೆ ನೀಡಿದ ಮಹಾನುಭಾವರೂ ಹಾಗೂ ಮಾದರೀ ಕರ್ನಾಟಕದ ಶಿಲ್ಪಿಗಳೂ ಆದ ಭಾರತರತ್ನ ಸರ್. ಎಂ ವಿಶ್ವೇಶ್ವರಯ್ಯನವರ ಜನ್ಮದಿನಕ್ಕೆ ಹೊಂದುವೆಂತೆ ಸೆಪ್ಟೆಂಬರ್ ೧೫ರ ಸುತ್ತಮುತ್ತ ೩ ದಿನಗಳ ಕಾಲ ಆಯೋಜಿಸಲ್ಪಡುವ ಈ ಸಮ್ಮೇಳನವು ರಾಜ್ಯದ ಯಾವುದಾದರೊಂದು ವಿಶ್ವವಿದ್ಯಾಲಯ ಅಥವಾ ಸಂಶೋಧನಾ ಸಂಸ್ಥೆಯೊಂದರಲ್ಲಿ ನಡೆಯುತ್ತದೆ. ೨೦೦೪ ರಲ್ಲಿ ಸರ್. ಎಂ ವಿಶ್ವೇಶ್ವರಯ್ಯನವರ ಜನ್ಮದಿನದಂದೇ ಸ್ವದೇಶಿ ವಿಜ್ಞಾನ ಆಂದೋಳನ ಕರ್ನಾಟಕವು ಪ್ರಾರಂಭವಾಗಿದ್ದು ಕೂಡ. ಸಂಸ್ಥೆಗೆ ಇದು ಮಹತ್ವದ ಸಂದರ್ಭವಾದ ಕಾರಣ, ಸಮ್ಮೇಳನದಲ್ಲಿ ಪಾರಂಪರಿಕ ಹಾಗೂ ನೂತನ ವಿಜ್ಞಾನಗಳ ಪ್ರಬುಧ್ದ ವಿದ್ವಾಂಸರನ್ನು ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರವನ್ನು ನೀಡಿ ಸನ್ಮಾನಿಸುವುದು ನಮ್ಮ ಸಂಪ್ರದಾಯವಾಗಿದೆ. ಈ ಪುರಸ್ಕಾರವನ್ನು ಸ್ವೀಕರಿಸಿದವರಲ್ಲಿ ಭಾರತರತ್ನ ಪ್ರೊ. ಸಿ. ಎನ್. ಆರ್. ರಾವ್, ಡಾ. ಪಂಡಿತ್ ಭೀಮಸೇನ ಜೋಶಿ ಯವರೂ ಸೇರಿದ್ದಾರೆ. ಹಾಗೆಯೇ, ೨೦೧೪ ರಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹತ್ವದ ಕಾಣಿಕೆ ನೀಡಿದವರನ್ನು ಗುರುತಿಸಲು ಭೀಮಸೇನ ಜೋಶಿ ಸಾಂಸ್ಕೃತಿಕ ಪುರಸ್ಕಾರವನ್ನೂ, ೨೦೧೬ ರಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಘನವಸ್ತುವಿಜ್ಞಾನ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದವರನ್ನು ಗುರುತಿಸಲು ಸಿ. ಎನ್. ಆರ್. ರಾವ್ ವಿಜ್ಞಾನ ಪುರಸ್ಕಾರವನ್ನೂ ಸಂಸ್ಥೆ ಪ್ರಾರಂಭಿಸಿದೆ.

೨೦೧೯: ಹದಿನೈದನೇ ಸಮ್ಮೇಳನ, ದಾವಣಗೆರೆ ವಿಶ್ವವಿದ್ಯಾಲಯ

೨೦೧೮: ಹದಿನಾಲ್ಕನೇ ಸಮ್ಮೇಳನ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ

೨೦೧೭: ಹದಿಮೂರನೇ ಸಮ್ಮೇಳನ, ರಾಮಯ್ಯ ಆನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು
೨೦೧೬: ಹನ್ನೆರಡನೇ ಸಮ್ಮೇಳನ, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ
೨೦೧೫: ಹನ್ನೊಂದನೇ ಸಮ್ಮೇಳನ, ಲಕ್ಷ್ಮೀ ವೆಂಕಟೇಶ ದೇಸಾಯಿ ಕಾಲೇಜು, ರಾಯಚೂರು

೨೦೧೪: ಹತ್ತನೇ ಸಮ್ಮೇಳನ, ಮೈಸೂರು ವಿಶ್ವವಿದ್ಯಾಲಯ, ಮೈಸೂರು

೨೦೧೩: ಒಂಭತ್ತನೇ ಸಮ್ಮೇಳನ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ
೨೦೧೨: ಎಂಟನೇ ಸಮ್ಮೇಳನ, ಕೃಷಿ ವಿಶ್ವವಿದ್ಯಾಲಯ, ಧಾರವಾಡ

೨೦೧೧: ಏಳನೇ ಸಮ್ಮೇಳನ, ಗುಲ್ಬರ್ಗಾ ವಿಶ್ವವಿದ್ಯಾಲಯ

೨೦೧೦: ಆರನೇ ಸಮ್ಮೇಳನ, ಪಶುವೈದ್ಯಕೀಯ ಕಾಲೇಜು, KVAFSU(B), ಬೆಂಗಳೂರು
೨೦೦೯: ಐದನೇ ಸಮ್ಮೇಳನ, ಮಂಗಳೂರು ವಿಶ್ವವಿದ್ಯಾಲಯ
೨೦೦೮: ನಾಲ್ಕನೇ ಸಮ್ಮೇಳನ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ
೨೦೦೭: ಮೂರನೇ ಸಮ್ಮೇಳನ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಶಿವಮೊಗ್ಗ
೨೦೦೬: ಎರಡನೇ ಸಮ್ಮೇಳನ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
೨೦೦೫: ಮೊದಲನೇ ಸಮ್ಮೇಳನ, ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯ, ಬೆಂಗಳೂರು