ಸ್ವವಿಆಕ ಕನ್ನಡದಲ್ಲಿ ವಿಜ್ಞಾನವನ್ನು ಭಾರತೀಯ ಮೂಲಗಳನ್ನು ಮರೆಯದೆ ಪ್ರೋತ್ಸಾಹಿಸಲು ಕೆಳಗಿನ ವೇದಿಕೆಗಳ ಮೂಲಕ ವಿವಿಧ ಕೆಲಸಕಾರ್ಯಗಳನ್ನು ಕೈಗೊಳ್ಳುತ್ತದೆ-
೧. ಪಾಣಿನೀಯಂ – ಅಷ್ಟಾಧ್ಯಾಯೀ, ಭಾಷಾಶಾಸ್ತ್ರ ಹಾಗೂ ಮಾನವಿಕ ವಿಜ್ಞಾನ
೨. ಪತಂಜಲೀಯಂ – ಅಷ್ಟಾಂಗ ಯೋಗ, ಮನೋ-ಆಧ್ಯಾತ್ಮಕ ವಿಜ್ಞಾನ ಮತ್ತು ತತ್ವಶಾಸ್ತ್ರ
೩. ಭಾರತೀಯಂ – ನಾಟ್ಯಶಾಸ್ತ್ರ, ಸಮಾಜಸಂಸ್ಕೃತಿ ವಿಜ್ಞಾನ, ಕಲೆ ಹಾಗೂ ಸಂಗೀತ ಶಾಸ್ತ್ರಗಳು
೪. ಕೌಟಿಲೀಯಂ – ಅರ್ಥಶಾಸ್ತ್ರ, ಆರ್ಥಿಕತೆ, ಸಮಾಜಶಾಸ್ತ್ರ, ರಾಜನೀತಿ ಹಾಗೂ ಆಡಳಿತ ಶಾಸ್ತ್ರಗಳು
೫. ಧನ್ವಂತರೀಯಂ – ಆರೋಗ್ಯ ಶಾಸ್ತ್ರ (ಪ್ರಾಚೀನ ಹಾಗೂ ನೂತನ), ಆಯುರ್ವೇದ, ಸಿಧ್ಧ, ಯುನಾನಿ ಹಾಗೂ ಇತರ ಭಾರತೀಯ ಆರೋಗ್ಯ ಪದ್ಧತಿಗಳು
೬. ಪರಾಶರೀಯಂ – ಕೃಷಿ, ತೋಟಗಾರಿಕೆ, ರೇಷ್ಮೆ ಉತ್ಪಾದನೆ, ಪಶುವೈದ್ಯಕೀಯ ವಿಜ್ಞಾನ, ಮೀನುಗಾರಿಕೆ ಇತ್ಯಾದಿ
೭. ವಸುಂಧರೀಯಂ – ಭೂವಿಜ್ಞಾನ, ಪರಿಸರವಿಜ್ಞಾನ, ವ್ಯೋಮಶಾಸ್ತ್ರ ಇತ್ಯಾದಿ
೮. ನಾಗಾರ್ಜುನೀಯಂ – ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ವಸ್ತು ವಿಜ್ಞಾನ
೯. ಭಾಸ್ಕರೀಯಂ – ಭೌತಶಾಸ್ತ್ರ, ಗಣಿತ ಹಾಗೂ ಖಭೌತಶಾಸ್ತ್ರ
೧೦. ಭಾರದ್ವಾಜೀಯಂ – ಶಿಲ್ಪಶಾಸ್ತ್ರ, ಯಂತ್ರಶಾಸ್ತ್ರ, ವೈಮಾಂತರಿಕ್ಷ ವಿಜ್ಞಾನ, ಸಾರಿಗೆ ವಿಜ್ಞಾನ
೧೧. ಜೆ. ಸಿ. ಬೋಸೀಯಂ – ವಿದ್ಯುದ್ವಿಜ್ಞಾನ, ಶಕ್ತಿ, ಮಾಹಿತಿ ಸಂವಹನ ಇತ್ಯಾದಿ ವಿಷಯಗಳು
೧೨ ವರಾಹಮಿಹಿರಂ – ಬೃಹದ್ಸಂಹಿತಾ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮುಂತಾದ ಅತ್ಯಾಧುವನಿಕ ವಿಷಯಗಳು
ಈ ವೇದಿಕೆಗಳ ಜೊತೆಯೇ, ಸಂಸ್ಥೆಯು ಎರಡು ಮುಖ್ಯ ಗುಂಪುಗಳನ್ನು ಹೊಂದಿದೆ ೧) ಮಾತೃವೇದಿಕೆ – ಸಂಸ್ಥೆಯ ಎಲ್ಲಾ ಮಹಿಳಾ ಸದಸ್ಯರೂ, ಸಹಜವಾಗಿ ಮಾತೃವೇದಿಕೆಯ ಸದಸ್ಯರಾಗಿರುತ್ತಾರೆ ೨) ಯುವ ವಿದ್ಯಾರ್ಥಿ ವೇದಿಕೆ – ಸಂಸ್ಥೆಯ 45 ವರ್ಷಗಳಿಗಿಂತಾ ಕಿರಿಯ ಸದಸ್ಯರು ಯುವ ವಿದ್ಯಾರ್ಥಿ ವೇದಿಕೆಯ ಸಹಜ ಸದಸ್ಯರಾಗಿರುತ್ತಾರೆ.