ಧ್ಯೇಯೋದ್ದೇಶಗಳು

ಸ್ವದೇಶಿ ವಿಜ್ಞಾನ ಆಂದೋಳನ ಕರ್ನಾಟಕವು ಭಾರತೀಯ ವೈಜ್ಞಾನಿಕ ಸಾಧನೆಗಳನ್ನು ಜನಪ್ರಿಯಗೊಳಿಸುವುದು ಹಾಗೂ ಕನ್ನಡದಲ್ಲಿ ವೈಜ್ಞಾನಿಕ ಚಿಂತನೆ, ಕಾರ್ಯ ಹಾಗೂ ಸಂವಹನಗಳನ್ನು ಎಲ್ಲಾ ಸ್ತರಗಳಲ್ಲಿ (ಜನಪ್ರಿಯ ಸಾಹಿತ್ಯ, ಶಿಕ್ಷಣ ಹಾಗೂ ವೃತ್ತಿಪರ) ಸಧೃಢಗೊಳಿಸುವ ಕಾಯಕಲ್ಪ ಹೊಂದಿದೆ. ಈ ನಿಟ್ಟಿನಲ್ಲಿ ನಾವು ಕನ್ನಡದಲ್ಲಿ ಹಿಂದಿನ ಹಾಗೂ ಇಂದಿನ ವೈಜ್ಞಾನಿಕ ವಿಚಾರಗಳನ್ನು ವಿವಿಧ ರೂಪಗಳಲ್ಲಿ ಪ್ರಚುರಗೊಳಿಸುವಲ್ಲಿ ತೊಡಗಿಸಿಕೊಂಡಿದ್ದೇವೆ.


ನಮ್ಮ ವಿಸ್ತೃತವಾದ ಧ್ಯೇಯೋದ್ದೇಶಗಳು ಇಂತಿವೆ:

  • ಸ್ವದೇಶಿ ಉತ್ಸಾಹದೊಂದಿಗೆ ಕನ್ನಡದಲ್ಲಿ ಸಾಂಪ್ರದಾಯಿಕ ಮತ್ತು ನವ್ಯ ವಿಜ್ಞಾನಗಳನ್ನು ಎಲ್ಲಾ ಶಾಲಾ-ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗಳ ಮಟ್ಟದಲ್ಲಿ ಸಕ್ರಿಯವಾಗಿ ಹರಡುವುದು
  • ಸ್ವದೇಶಿ ವಿಜ್ಞಾನಗಳಾದ ಆಯುರ್ವೇದ, ಸಿದ್ಧಾ, ಯೋಗ ಮತ್ತು ಭಾರತೀಯ ಸಂಖ್ಯಾಶಾಸ್ತ್ರ, ವಾಸ್ತು ವಿದ್ಯೆ ಇತ್ಯಾದಿಗಳನ್ನು ನವ್ಯ ವಿಜ್ಞಾನದ ಜೊತೆ ಬೆಸೆದು ನೂತನ ವಿಜ್ಞಾನ ಚಳುವಳಿಯನ್ನು ಪ್ರಾರಂಭಿಸಿ ಪ್ರೋತ್ಸಾಹಿಸುವುದು
  • ಜಾಗತೀಕರಣದ ಜೊತೆ ವೈಜ್ಞಾನಿಕ ಯುಗ ತಂದಿರುವ ಸವಾಲುಗಳು ಹಾಗೂ ಅವಕಾಶಗಳನ್ನು ಜನರಿಗೆ ಮುಟ್ಟಿಸುವುದು
    ಭಾರತದ ಸಾಂಪ್ರದಾಯಿಕ ವಿಜ್ಞಾನವು ಸೇರಿದಂತೆ ಕನ್ನಡದಲ್ಲಿ ತಂತ್ರಜ್ಞಾನ, ಕೃಷಿ ಮತ್ತು ಇನ್ನಿತರ ವಿಜ್ಞಾನಗಳಲ್ಲಿ ಉತ್ಕೃಷ್ಟ ಮಟ್ಟಕ್ಕೆ ತರುವುದು.
  • ವಿವಿಧ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಮತ್ತು ಯುವ ವಿಜ್ಞಾನಿಗಳ ಸೃಜನಶೀಲತೆ, ವೈಚಾರಿಕತೆಯನ್ನು ಪ್ರೋತ್ಸಾಹಿಸುವುದು
  • ವಿಜ್ಞಾನ ಕ್ಷೇತ್ರದಲ್ಲಿ ಕಾರ್ಯನೀತಿ ನಿರೂಪಣೆ, ಕನ್ನಡದಲ್ಲಿ ಪುಸ್ತಕಗಳ, ನಿಯತಕಾಲಿಕೆಗಳ ಪ್ರಕಟಣೆ, ವಿದ್ವದ್ಗೋಷ್ಠಿಗಳ, ಕಮ್ಮಟಗಳ ಆಯೋಜನೆ ಮತ್ತು ತರಬೇತಿ ಕಾರ್ಯಗಾರಗಳನ್ನು ಏರ್ಪಡಿಸುವುದು
  • ನಾಡಿನ ಪ್ರತಿಭಾಪೂರ್ಣ ವಿದ್ವಾಂಸರನ್ನು ಗೌರವ ಪುರಸ್ಕಾರಗಳಿಂದ ಸನ್ಮಾನಿಸುವುದು
  • ನಮ್ಮ ಧ್ಯೇಯಗಳ ಪ್ರಚಾರಕ್ಕಾಗಿ ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಕೇಂದ್ರಗಳು ಹಾಗೂ ಸಂಶೋಧನಾ ಸಂಸ್ಥೆಗಳೊಡನೆ ಕೈಜೋಡಿಸುವುದು, ಹೊಸ ಸಂಸ್ಥೆಗಳನ್ನು ಕಟ್ಟುವುದು