ನಮ್ಮ ಇತರೇ ಹಿಂದಿನ ಕಾರ್ಯಕ್ರಮಗಳು

ನಮ್ಮ ಜಿಲ್ಲಾ ಸಮಿತಿಗಳು ಅಥವಾ ವೇದಿಕೆಗಳು ಸಾಧ್ಯವಾದಗಲೆಲ್ಲಾ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಾರ್ಯಗಳನ್ನು ಹಮ್ಮಿಕೊಳ್ಳುತ್ತವೆ. ಅಂತಹ ಕೆಲವು ಕಾರ್ಯಕ್ರಮಗಳ ಉದಾಹರಣೆಗಳು ಕೆಳಗಿವೆ.

• ವೇದಗಣಿತ ಹಾಗೂ ಪ್ರಾಚೀನ ಭಾರತೀಯ ಗಣಿತ – ಈಗಿನ ಪ್ರಸ್ತುತತೆ (ಬೆಂಗಳೂರು ಸಮಿತಿ)
• ಕಾಲಮಾನದಲ್ಲಿ ಗಣಿತದ ಪ್ರಗತಿ (ಭಾಸ್ಕರ ಗಣಿತ ವೇದಿಕೆ)
• ಡಾ. ಜಗದೀಶಚಂದ್ರ ಬೋಸರ ಜನ್ಮದಿನದ ಅಂಗವಾಗಿ, ಜೆ. ಸಿ. ಬೋಸೀಯಂ ವೇದಿಕೆಯ ನೇತೃತ್ವದಲ್ಲಿ, ವಿದ್ಯುನ್ಮಾನ ಹಾಗೂ ಸಂವಹನ ವಿಜ್ಞಾನಗಳ ಕುರಿತಾದ ರಾಷ್ಟ್ರೀಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು
• ಕರ್ನಾಟಕದ ಭಾರತರತ್ನ ಸನ್ಮಾನಿತರ ಕೊಡುಗೆಗಳು (ಡಾ. ಸಿ ವಿ ರಾಮನ್, ಸರ್ ಎಂ ವಿಶ್ವೇಶ್ವರಯ್ಯ, ಡಾ. ಭೀಮಸೇನ ಜೋಶಿ, ಡಾ. ಸಿ. ಎನ್. ಆರ್. ರಾವ್) ಕುರಿತಾಗಿ ಕಾರ್ಯಕ್ರಮ – ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಹಾಗೂ ಜೆ. ಸಿ. ಬೋಸೀಯಂ ವೇದಿಕೆ
• ಕನ್ನಡದಲ್ಲಿ ವಿಜ್ಞಾನ ಲೇಖನಗಳನ್ನು ಬರೆಯುವುದು ಹಾಗೂ ಕನ್ನಡದಲ್ಲಿ ವಿಜ್ಞಾನದ ಬೆಳವಣಿಗೆ ಕುರಿತಾಗಿ ಕಾರ್ಯಕ್ರಮ – ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ
• ವಚನದಲ್ಲಿ ವಿಜ್ಞಾನ – ಬೀದರ ಮತ್ತು ಗುಲ್ಬರ್ಗಾ ಸಮಿತಿಗಳು ಜೊತೆಗೂಡಿ
• ವರಾಹಮಿಹಿರಂ – ಶಿವಮೊಗ್ಗ ಯುವ ವಿದ್ಯಾರ್ಥಿ ವೇದಿಕೆಯ ವತಿಯಿಂದ ರಾಷ್ಟ್ರೀಯ ಸಮಾವೇಶ
• ವಿಜ್ಞಾನ ಮತ್ತು ತಂತ್ರಜ್ಞಾನ – ನಿನ್ನೆ ಮತ್ತು ಇಂದು, ಹಾನಸ ಜಿಲ್ಲಾ ಸಮಿತಿ