ರಾಷ್ಟ್ರಮಟ್ಟದ ಸಮಾವೇಶಗಳು

ಚತುರ್ಮುಖೀ ರಾಷ್ಟ್ರೀಯ ಸಮಾವೇಶ (೨೦೦೮)

ಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನೈಸರ್ಗಿಕ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಕಾಲೇಜು, ಉಜಿರೆ
ಈ ಸಮಾವೇಶದ ಇಂಗ್ಲೀಷ್, ಕನ್ನಡ ಹಾಗೂ ಹಿಂದಿ ನಡಾವಳಿಗಳನ್ನು ರಾಷ್ಟ್ರೀಯ ಆಯುರ್ವೇದ ಸಮಾವೇಶದ ನಡಾವಳಿಗಳೊಂದಿಗೆ (ಕೆಳಗೆ ನೋಡಿ) ಹೊರತರಲಾಯಿತು. ವಿಜ್ಞಾನದ ಐದು ಮುಖಗಳಾದ ಆಧ್ಯಾತ್ಮಿಕ, ಸಾಮಾಜಿಕ, ಆರೋಗ್ಯ, ವ್ಯವಸಾಯ ಹಾಗೂ ತಂತ್ರಜ್ಞಾನ ಸಂಬಂಧೀ ವಿಷಯಗಳನ್ನೊಳಗೊಂಡಿದ್ದ ಈ ನಡಾವಳಿಗಳಿಗೆ ಪಂಚಮುಖೀ ಎಂದು ಹೆಸರು ನೀಡಲಾಯಿತು. ಈ ಸಮಾವೇಶವನ್ನು ಕೆಳಕಂಡ ವಿಭಾಗಗಳಲ್ಲಿ ನಡೆಸಲಾಯಿತು-
ಪತಂಜಲೀಯಂ – ಅಷ್ಟಾಂಗ ಯೋಗ, ಮನೋ-ಆಧ್ಯಾತ್ಮಕತೆ ವಿಜ್ಞಾನ ಮತ್ತು ತತ್ವಶಾಸ್ತ್ರ
ಕೌಟಿಲೀಯಂ – ಅರ್ಥಶಾಸ್ತ್ರ, ಆರ್ಥಿಕತೆ, ಸಮಾಜಶಾಸ್ತ್ರ, ರಾಜನೀತಿ ಹಾಗೂ ಆಡಳಿತ ಶಾಸ್ತ್ರಗಳು
ಪರಾಶರೀಯಂ – ಕೃಶಿ, ತೋಟಗಾರಿಕೆ, ರೇಷ್ಮೆ ಉತ್ಪಾದನೆ, ಪಶುವೈದ್ಯಕೀಯ ವಿಜ್ಞಾನ, ಮೀನುಗಾರಿಕೆ ಇತ್ಯಾದಿ
ಭಾರದ್ವಾಜೀಯಂ – ಶಿಲ್ಪಶಾಸ್ತ್ರ, ಯಂತ್ರಶಾಸ್ತ್ರ, ವೈಮಾಂತರಿಕ್ಷ ವಿಜ್ಞಾನ, ಸಾರಿಗೆ ವಿಜ್ಞಾನ

ರಾಷ್ಟ್ರೀಯ ಆಯುರ್ವೇದ ಸಮಾವೇಶ (೨೦೦೭)

ಸ್ಥಳ: ಆಳ್ವಾ ಆಯುರ್ವೇದ ಕಾಲೇಜು, ಮೂಡಿಬಿದರೆ
ಇದೇ ಸಂದರ್ಭದಲ್ಲಿ ಧನ್ವಂತರೀ ಸ್ವಾಸ್ಥ್ಯ ವೇದಿಕೆಯ ಬಳ್ಳಾರಿ ವಿಭಾಗದ ವತಿಯಿಂದ “ಆಯುರ್ವೇದದಲ್ಲಿ ಲೋಹಗಳು ಮತ್ತು ಖನಿಜಗಳು” ಹಾಗೂ ಧಾರವಾಡ ವಿಭಾಗದ ವತಿಯಿಂದ “ಆಯುರ್ವೇದ ಮೂಲಿಕಾ ಮೇಳ” ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು.

ತ್ರೀಮುಖೀ ರಾಷ್ಟ್ರೀಯ ಸಮಾವೇಶ – ಧನ್ವಂತರೀಯಂ, ಭಾಸ್ಕರೀಯಂ, ಭಾರತೀಯಂ (೨೦೦೬)

ಸ್ಥಳ: ಭಾರತೀಯ ಸಾಂಸ್ಕೃತಿಕ ವಿದ್ಯಾ ಮಂದಿರ, ಬೆಂಗಳೂರು
ಈ ಸಮಾವೇಶದ ನಡಾವಳಿಗಳನ್ನು ಶಾಸ್ತ್ರತ್ರಯೀ ಎಂಬ ಹೆಸರಿನಡಿಯಲ್ಲಿ ಹೊರತಂದಿದ್ದು, ಇದು ಆಂಗ್ಲ, ಕನ್ನಡ ಹಾಗೂ ಹಿಂದೀ ಭಾಷೆಗಳ ಸಂಶೋಧನಾ ಪ್ರಬಂಧಗಳನ್ನೊಳಗೊಂಡಿದೆ. ಧನ್ವಂತರೀಯಂ ವಿಭಾಗವು ಆಯರ್ವೇದ ಹಾಗೂ ಸಮಗ್ರ ಸ್ವಾಸ್ಥ್ಯ ವಿಜ್ಞಾನಗಳ ಪ್ರಬಂಧಗಳನ್ನೊಳಗೊಂಡಿದ್ದು, ಭಾಸ್ಕರೀಯಂ ಗಣಿತ ವಿಜ್ಞಾನದ ಬಗ್ಗೆಯೂ, ಭಾರತೀಯಂ ಕಲೆ ಹಾಗೂ ಸಂಗೀತಗಳ ಕುರಿತಾದ ಪ್ರಬಂಧಗಳನ್ನೂ ಒಳಗೊಂಡಿವೆ.