ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮಾವೇಶವು ಪ್ರತಿ ನವೆಂಬರ್ ೭ ನೇ ತಾರೀಖು, ಡಾ. ಮೇಡಂ ಮೇರಿ ಕ್ಯೂರಿ ಮತ್ತು ಸರ್ ಸಿ ವಿ ರಾಮನ್ ರ ಜನ್ಮದಿನದಂದು ಏರ್ಪಡಿಸಲಾಗುತ್ತದೆ. ಈ ಇಬ್ಬರೂ ಭೌತಶಾಸ್ತ್ರದ ನೋಬೆಲ್ ಪುರಸ್ಕೃತರ ಕೊಡುಗೆಗಳ ನೆನಪಿಗಾಗಿ ಈ ದಿನವನ್ನು ಸಂಸ್ಥೆ ಆಯ್ದುಕೊಂಡಿದ್ದು, ಇದು ನಮ್ಮ ಸಂಸ್ಥೆಯ ಎರಡನೇ ದೊಡ್ಡ ಸಮ್ಮೇಳನವಾಗಿರುತ್ತದೆ. ಈ ಸಂಧರ್ಭದಲ್ಲಿ ಭಾರತದ ಉತ್ಕೃಷ್ಟ ಮಹಿಳಾ ವಿಜ್ಞಾನಿಯೋರ್ವರಿಗೆ ಮೇರಿ ಕ್ಯೂರಿ ಮಹಿಳಾ ವಿಜ್ಞಾನ ಪುರಸ್ಕಾರವನ್ನು ನೀಡಿ ಅವರ ಕೊಡುಗೆಗಳನ್ನು ಗುರುತಿಸಲಾಗುತ್ತದೆ. ಹಾಗೆಯೇ, ಗಣಿತ, ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಮಹಿಳಾ ವಿಜ್ಞಾನಿಯೋರ್ವರಿಗೆ ಸಿ. ವಿ. ರಾಮನ್ ಮಹಿಳಾ ವಿಜ್ಞಾನ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತದೆ.