ವಿಜ್ಞಾನಿಗಳ ಕೊಡುಗೆಗಳನ್ನು ಗುರುತಿಸಿ ಸನ್ಮಾನಿಸುವುದು

ಸಂಸ್ಥೆಯ ಪ್ರತಿಷ್ಠಿತ ವಿಶ್ವೇಶ್ವರಯ್ಯ ಪುರಸ್ಕಾರವನ್ನು ಪ್ರತೀ ವರ್ಷದ ಕನ್ನಡ ವಿಜ್ಞಾನ ಸಮ್ಮೇಳನದ ಸಂದರ್ಭದಲ್ಲಿ ಸೆಪ್ಟೆಂಬರ್ ೧೫ ನೇ ತಾರೀಖಿನಂದು ಪ್ರಬುದ್ಧ ಹಾಗೂ ಶ್ರೇಷ್ಠ ವಿಜ್ಞಾನಿಯೋರ್ವರಿಗೆ ನೀಡಿ ಗೌರವಿಸಲಾಗುತ್ತದೆ. ಪುರಸ್ಕೃತರು ಸಾಂಪ್ರದಾಯಿಕ ಅಥವಾ ನೂತನ ವಿಜ್ಞಾನದ ಯಾವುದೇ ವಿಷಯವರ್ಗದಿಂದಲೂ ಬಂದಿರಬಹುದು. ಈ ವರೆಗಿನ ನಮ್ಮ ಪುರಸ್ಕೃತರನ್ನು ತಿಳಿಯಲು ಕನ್ನಡ ವಿಜ್ಞಾನ ಸಮ್ಮೇಳನದ ಪುಟವನ್ನು ನೋಡಿ.

ಈ ಪ್ರತಿಷ್ಠಿತ ಪುರಸ್ಕಾರವನ್ನು ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮಾವೇಶದ ಸಂದರ್ಭದಲ್ಲಿ ಪ್ರತಿಭಾವಂತ ಹಾಗೂ ಪ್ರಭಾವಶಾಲೀ ಮಹಿಳಾ ವಿಜ್ಞಾನಿಯೋರ್ವರಿಗೆ ನೀಡಲಾಗುತ್ತದೆ. ನಮ್ಮ ಪುರಸ್ಕ಼ತರ ಬಗ್ಗೆ ತಿಳಿಯಲು ಮಹಿಳಾ ವಿಜ್ಞಾನ ಸಮಾವೇಶದ ಪುಟವನ್ನು ನೋಡಿ.

ಈ ಪ್ರತಿಷ್ಠಿತ ಪುರಸ್ಕಾರವನ್ನು ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮಾವೇಶದ ಸಂದರ್ಭದಲ್ಲಿ ಪ್ರತಿಭಾವಂತ ಹಾಗೂ ಪ್ರಭಾವಶಾಲೀ ಮಹಿಳಾ ವಿಜ್ಞಾನಿಯೋರ್ವರಿಗೆ ನೀಡಲಾಗುತ್ತದೆ. ಮೊದಲಿನಂತೆಯೇ ನಮ್ಮ ಪುರಸ್ಕೃತರ ವಿವರಗಳನ್ನು ಮಹಿಳಾ ವಿಜ್ಞಾನ ಸಮಾವೇಶದ ಪುಟದಲ್ಲಿ ನೋಡಬಹುದು.